ಕರ್ನಾಟಕದಲ್ಲಿ ಅನೇಕ ಬುಡಕಟ್ಟು ಸಮುದಾಯಗಳಿವೆ.(ಟ್ರೈಬ್ಸ್)
                                            ಅವುಗಳಲ್ಲಿ ಕೆಲವು, ತಮ್ಮ ಮೂಲನೆಲೆಯಾದ ಕಾಡುಗಳಲ್ಲಿ ಮತ್ತು ಅವುಗಳ ಆಸುಪಾಸಿನ ಪ್ರದೇಶಗಳಲ್ಲಿ ಜೀವಿಸುತ್ತಿವೆ.
                                            ಉಳಿದವು ಅಲೆಮಾರಿ ಜನಾಂಗಗಳಾಗಿದ್ದು ತಮ್ಮ ಭಾಷೆಗಳೊಂದಿಗೆ ತಾವೂ ಚಲಿಸುತ್ತಿವೆ. ಈ ಬುಡಕಟ್ಟುಗಳೆಲ್ಲವೂ
                                            ಬೇರೆ ಬೇರೆ ಪ್ರಮಾಣದಲ್ಲಿ ಆಧುನಿಕತೆಯ.ಪ್ರಭಾವಕ್ಕೆ ಒಳಗಾಗಿವೆ. ಇವು ಬಳಸುವ ಭಾಷೆಗಳು ನಿಜವಾಗಿಯೂ
                                            ಅಪಾಯದ ಅಂಚಿನಲ್ಲಿವೆ. ಇವುಗಳ ಪೈಕಿ ಕೆಲವಾದರೂ ತಮ್ಮ ಮೂಲಭಾಷೆಯ ಪ್ರಮುಖ ಲಕ್ಷಣಗಳನ್ನು ಮುಕ್ಕಾಗದಂತೆ
                                            ಕಾಪಾಡಿಕೊಂಡಿವೆ. ಅವುಗಳ ಸರಿಯಾದ ಅಧ್ಯಯನವು ಕನ್ನಡದ ಪೂರ್ವಸ್ಥಿತಿಗಳನ್ನು ಸರಿಯಾಗಿ ತಿಳಿದುಕೊಳ್ಳಲು
                                            ನೆರವು ನೀಡಬಹುದು. ಇಂತಹ ಕೆಲವು ಬುಡಕಟ್ಟು ಭಾಷೆಗಳನ್ನು, ಇಂದಿನ ಕರ್ನಾಟಕದ ಭೌಗೋಳಿಕ ಮೇರೆಗಳ ಆಚೆಗಿರುವ,
                                            ತಮಿಳುನಾಡಿನ ನೀಲಗಿರಿ ಮತ್ತು ಕೊಯಮತ್ತೂರು ಜಿಲ್ಲೆಗಳಲ್ಲಿ ಮಾತನಾಡುತ್ತಾರೆ. ಬುಡಕಟ್ಟು ಜನಾಂಗಗಳಲ್ಲಿ
                                            ಬಹುಪಾಳು ಜನರು ಈಗ ದ್ವಿಭಾಷಿಕರಾಗಿದ್ದಾರೆ. ಅವರು ತಮ್ಮ ಅಗತ್ಯಕ್ಕೆ ತಕ್ಕಹಾಗೆ, ಕನ್ನಡ, ತಮಿಳು,
                                            ತೆಲುಗು, ಮಲಯಾಳಂ ಅಥವಾ ತುಳು ಭಾಷೆಗಳನ್ನು ಕಲಿತಿರುತ್ತಾರೆ. 
                                     
                                    
                                        ಇನ್ನು ಮುಂದೆ ಕರ್ನಾಟಕದ ಪ್ರಮುಖ ಬುಡಕಟ್ಟು ಭಾಷೆಗಳು ಮತ್ತು
                                            ಅವುಗಳಿಗೆ ಸಂಬಂಧಿಸಿದಂತೆ ಲಭ್ಯವಿರುವ ಕೆಲವು ವಿವರಗಳನ್ನು ಕೊಡಲಾಗಿದೆ. ಬುಡಕಟ್ಟಿನ ಜನಸಂಖ್ಯೆಯ
                                            ವಿವರಗಳು ಹಳೆಯ ಜನಗಣತಿಯನ್ನು ಅನುಸರಿಸಿರುವುದರಿಂದ ಆ ಮಾಹಿತಿಯು ಕರಾರುವಾಕ್ಕಾಗಿ ಇರುವುದಿಲ್ಲ.
                                        
                                     
                                    
                                          
                                    
                                        
                                            | 
                                                 
                                                    ಕ್ರ.ಸಂಖ್ಯೆ
                                                 
                                             | 
                                            
                                                 
                                                    ಬುಡಕಟ್ಟು
                                                 
                                             | 
                                            
                                                 
                                                    ಭಾಷೆ
                                                 
                                             | 
                                            
                                                 
                                                    ಸ್ಥಳ
                                                 
                                             | 
                                            
                                                 
                                                    ಜನಸಂಖ್ಯೆ
                                                 
                                             | 
                                         
                                        
                                            | 
                                                 
                                                    1 
                                             | 
                                            
                                                 
                                                    ಬಡಗ
                                                 
                                             | 
                                            
                                                 
                                                    ಬಡಗ
                                                 
                                             | 
                                            
                                                 
                                                    ನೀಲಗಿರಿ ಜಿಲ್ಲೆ, ತಮಿಳುನಾಡು. 
                                             | 
                                            
                                                 
                                                    3 ಲಕ್ಷ
                                                 
                                             | 
                                         
                                        
                                            | 
                                                 
                                                    2 
                                             | 
                                            
                                                 
                                                    ಬೆಟ್ಟ ಕುರುಬ
                                                 
                                             | 
                                            
                                                 
                                                    ಬೆಟ್ಟ ಕುರುಂಬ
                                                 
                                             | 
                                            
                                                 
                                                    ಮೈಸೂರು ಜಿಲ್ಲೆ
                                                 
                                             | 
                                            
                                                 
                                                    32000 
                                             | 
                                         
                                        
                                            | 
                                                 
                                                    3 
                                             | 
                                            
                                                 
                                                    ಇರುಳ
                                                 
                                             | 
                                            
                                                 
                                                    ಇರುಳ, ಸ್ವತಂತ್ರ ಭಾಷೆ
                                                 
                                             | 
                                            
                                                 
                                                    ಹಳೆಯ ಮೈಸೂರು ಪ್ರದೇಶ
                                                 
                                             | 
                                            
                                                 
                                                    5200 
                                             | 
                                         
                                        
                                            | 
                                                 
                                                    4 
                                             | 
                                            
                                                 
                                                    ಹಕ್ಕಿಪಿಕ್ಕಿ
                                                 
                                             | 
                                            
                                                 
                                                    ವಾಗರಿ
                                                 
                                             | 
                                            
                                                 
                                                    ಅಲೆಮಾರಿ ಜನಾಂಗ
                                                 
                                             | 
                                            
                                                 
                                                    --
                                                 
                                             | 
                                         
                                        
                                            | 
                                                 
                                                    5 
                                             | 
                                            
                                                 
                                                    ತೋಡ
                                                 
                                             | 
                                            
                                                 
                                                    ತೋಡ, ತುದ
                                                 
                                             | 
                                            
                                                 
                                                    ನೀಲಗಿರಿ ಬೆಟ್ಟಪ್ರದೇಶ
                                                 
                                             | 
                                            
                                                 
                                                    1600 
                                             | 
                                         
                                        
                                            | 
                                                 
                                                    6 
                                             | 
                                            
                                                 
                                                    ಕೊರಗರು
                                                 
                                             | 
                                            
                                                 
                                                    ಕೊರಗ
                                                 
                                             | 
                                            
                                                 
                                                    ದಕ್ಷಿಣ ಕನ್ನಡ ಜಿಲ್ಲೆ, ಬುಟ್ಟಿ ಹೆಣೆಯುವ ವೃತ್ತಿ.
                                                 
                                             | 
                                            
                                                 
                                                    1000 
                                             | 
                                         
                                        
                                            | 
                                                 
                                                    7 
                                             | 
                                            
                                                 
                                                    ಕೋಟ
                                                 
                                             | 
                                            
                                                 
                                                    ಕೋಟ, ತಮಿಳು ಮತ್ತು ಮಲಯಾಳಂ ಭಾಷೆಗಳಿಗೆ ಹತ್ತಿರ.
                                                 
                                             | 
                                            
                                                 
                                                    ನೀಲಗಿರಿ ಜಿಲ್ಲೆ, ವ್ಯವಸಾಯವೇ ಮುಖ್ಯ ಕಸುಬು
                                                 
                                             | 
                                            
                                                 
                                                    1500 
                                             | 
                                         
                                        
                                            | 
                                                 
                                                    8 
                                             | 
                                            
                                                 
                                                    ಜೇನುಕುರುಬ
                                                 
                                             | 
                                            
                                                 
                                                    ಅನೇಕ ಉಪಭಾಷೆಗಳು
                                                 
                                             | 
                                            
                                                 
                                                    ನೀಲಗಿರಿ ಬೆಟ್ಟಗಳು
                                                 
                                             | 
                                            
                                                 
                                                    5000 
                                             | 
                                         
                                        
                                            | 
                                                 
                                                    9 
                                             | 
                                            
                                                 
                                                    ಸೋಲಿಗರು
                                                 
                                             | 
                                            
                                                 
                                                    ಸೋಲಿಗ ಭಾಷೆ
                                                 
                                             | 
                                            
                                                 
                                                    ಬಿಳಿಗಿರಿರಂಗನ ಬೆಟ್ಟ
                                                 
                                             | 
                                            
                                                 
                                                    ಸು. 20000
                                                 
                                             | 
                                         
                                        
                                            | 
                                                 
                                                    10. 
                                             | 
                                            
                                                 
                                                    ಬೆಳಾರಿ
                                                 
                                             | 
                                            
                                                 
                                                    ಬೆಳಾರಿ ಭಾಷೆ
                                                 
                                             | 
                                            
                                                 
                                                    ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕು, ಬುಟ್ಟಿ ಹೆಣೆಯುವ ವೃತ್ತಿ
                                                 
                                             | 
                                            
                                                 
                                                    50 ಕುಟುಂಬಗಳು
                                                 
                                             | 
                                         
                                     
                                    
                                          
                                    
                                        
                                     
                                    
                                        ಮುಂದಿನ ಓದು ಮತ್ತು ಲಿಂಕುಗಳು: 
                                    
                                        - 
                                            
                                                - ‘Mysore Tribes and Castes’, edited by H.V.Nanjunadaiah and L.K.
                                                    Ananthakrishna Iyer, 1935, Mysore Unibersity, Mysore. 
 
                                                - ‘Castes and Tribes of Southern India’ by Edgar Thurston and K. Rangachari
                                                    (7 volumes), 1905, Asian Educational Services, New Delhi.
 
                                                - ‘Tribal Demography of Karnataka State’, by Basak D.N., 1974,
                                                    Anthropological Survey of India. 
 
                                                - ‘The Koraga Language’, by D.N. Shankara Bhat, 1971, Deccan
                                                    College Postgraduate and Research Institute, Poona. 
 
                                                - ‘A Grammar of the Toda language’ by C.U. Shaktivel, 1977, 
                                                    Annamalai University 
 
                                                - ‘Badaga: A Dravidian Language’ by Ramaswami Balakrishnan, 1999,
                                                Annamalai University. 
 
                                                - ‘The Irula Language’ by Kamil Zvelebil, 1982, Harrassowitz.
                                                
 
                                                - ‘Coorg Kannada’ (jEnu kuruba dialect) by U. Padmanabha Upadhyaya,
                                                    1971, Deccan College Postgraduate and research Institute, Poona. 
 
                                                - ‘ಕರ್ನಾಟಕ ಭಾರತಿ, ಸೋಲಿಗ ನುಡಿ’, ಸಿದ್ದೇಗೌಡ ಮತ್ತು ಎ.ಆರ್. ಸುಬ್ಬುಕೃಷ್ಣ,
                                                    1982, ಭಾರತೀಯ ಭಾಷಾ ಸಂಸ್ಥಾನ, ಮೈಸೂರು. 
 
                                             
                                |